Feng Shui Tips: ನಿಮ್ಮ ಪ್ರತಿ ಆಸೆಯನ್ನೂ ಪೂರೈಸಬಲ್ಲದು ನಿಮ್ಮ ಮನೆ, ಅಂಗಡಿಯಲ್ಲಿರುವ ಈ ರೀತಿಯ ಕುದುರೆ ಪ್ರತಿಮೆ

Feng Shui Tips: ಭಾರತೀಯ ವಾಸ್ತು ಶಾಸ್ತ್ರದಂತೆ, ಪ್ರಗತಿಯನ್ನು ಪಡೆಯಲು ಹಲವು ಮಾರ್ಗಗಳನ್ನು ಚೀನೀ ವಾಸ್ತು ಶಾಸ್ತ್ರ ಫೆಂಗ್ ಶೂಯಿಯಲ್ಲಿ (Feng Shui)  ಹೇಳಲಾಗಿದೆ. ಇದಕ್ಕಾಗಿ, ಕುದುರೆ ಪ್ರತಿಮೆಯ (Horse Statue)  ಪರಿಹಾರಗಳನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

Written by - Yashaswini V | Last Updated : Oct 8, 2021, 10:15 AM IST
  • ಕುದುರೆಯ ಪ್ರತಿಮೆಯನ್ನು ಇಟ್ಟುಕೊಳ್ಳುವುದರಿಂದ ಧನಾತ್ಮಕತೆ ಬರುತ್ತದೆ
  • ಉತ್ತರ ದಿಕ್ಕಿನಲ್ಲಿ ಇರಿಸಲಾಗಿರುವ ಕುದುರೆ ಪ್ರತಿಮೆಯು ಪ್ರಗತಿಯನ್ನು ತರುತ್ತದೆ ಎಂದು ಹೇಳಲಾಗುವುದು
  • ಬೆಡ್ ರೂಂನಲ್ಲಿ ಜೋಡಿ ಕುದುರೆಯ ಪ್ರತಿಮೆ ಇಡುವುದರಿಂದ ವೈವಾಹಿಕ ಜೀವನವೂ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ
Feng Shui Tips: ನಿಮ್ಮ ಪ್ರತಿ ಆಸೆಯನ್ನೂ ಪೂರೈಸಬಲ್ಲದು ನಿಮ್ಮ ಮನೆ, ಅಂಗಡಿಯಲ್ಲಿರುವ ಈ ರೀತಿಯ ಕುದುರೆ ಪ್ರತಿಮೆ  title=
Feng Shui Tips: Horse Statue have been considered very effective

Feng Shui Tips: ಚೀನಾದ ವಾಸ್ತು ಶಾಸ್ತ್ರ ಫೆಂಗ್ ಶೂಯಿಯಲ್ಲಿ (Feng Shui), ಜೀವನದಲ್ಲಿ ಯಶಸ್ಸನ್ನು ಪಡೆಯಲು ಪರಿಣಾಮಕಾರಿ ಪರಿಹಾರಗಳನ್ನು ಹೇಳಲಾಗಿದೆ. ಈ ಕ್ರಮಗಳು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ, ಪ್ರಗತಿಯ ಹೊಸ ಮಾರ್ಗಗಳನ್ನು ತೆರೆಯುತ್ತವೆ ಎಂಬ ನಂಬಿಕೆ ಇದೆ. ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮದ ಹೊರತಾಗಿಯೂ ನೀವು ನಿಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ, ಫೆಂಗ್ ಶೂಯಿಯಲ್ಲಿ ಉಲ್ಲೇಖಿಸಲಾದ ಕುದುರೆಯ ಪ್ರತಿಮೆ ಅಥವಾ ಫೋಟೋವನ್ನು ಸ್ಥಾಪಿಸಿ ಪರಿಹಾರ ಪಡೆಯಲು ಪ್ರಯತ್ನಿಸಬಹುದು. ಫೆಂಗ್ ಶೂಯಿಯಲ್ಲಿ ಕುದುರೆ ಪ್ರತಿಮೆಯನ್ನು (Horse Statue) ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ, ಇದು ವೈವಾಹಿಕ ಜೀವನದಿಂದ ವೃತ್ತಿ, ಹಣ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸುವಲ್ಲಿ ಹೆಚ್ಚು ಪರಿಣಾಮಕಾರಿ ಎಂದು ನಂಬಲಾಗಿದೆ.

ಕುದುರೆ ಪ್ರತಿಮೆಯನ್ನು ಈ ರೀತಿ ಸ್ಥಾಪಿಸಿ:
ಫೆಂಗ್ ಶೂಯಿಯಲ್ಲಿ (Feng Shui) ನಿಮ್ಮ ಅವಶ್ಯಕತೆ ಅಥವಾ ಬಯಕೆಗೆ ಅನುಗುಣವಾಗಿ ಕುದುರೆಯ ಪ್ರತಿಮೆ ಅಥವಾ ಫೋಟೋವನ್ನು ಸ್ಥಾಪಿಸುವ ದಿಕ್ಕನ್ನು ಆರಿಸಬೇಕು ಎಂದು ಸೂಚಿಸಲಾಗುತ್ತದೆ. ಕುದುರೆಯ ಪ್ರತಿಮೆ ಅಥವಾ ಫೋಟೋ ಕುದುರೆಯ ಲಗಾಮು ಗೋಚರಿಸದಂತೆ ಇರಬೇಕು ಎಂಬುದನ್ನು ನೆನಪಿನಲ್ಲಿಡಿ. ಹಾಗೆಯೇ ಕುದುರೆ ಹೆಚ್ಚಿನ ವೇಗದಲ್ಲಿ ಓಡುತ್ತಿರಬೇಕು. ಕುದುರೆಗೆ ಸರಿಯಾದ ದಿಕ್ಕನ್ನು ಆಯ್ಕೆ ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ಕುದುರೆಯ ಮುಖವು ಮುಖ್ಯ ಬಾಗಿಲಿನ ಕಡೆಗೆ ಇರುವ ಸ್ಥಳದಲ್ಲಿ ವಿಗ್ರಹವನ್ನು ಇರಿಸಿದರೆ ಒಳಿತು ಎನ್ನಲಾಗುತ್ತದೆ.

ಇದನ್ನೂ ಓದಿ- Navratri 2021: ನವರಾತ್ರಿಯಲ್ಲಿ ಈ ಗಿಡಗಳನ್ನು ನೆಡುವುದು ಅತ್ಯಂತ ಶುಭ, ದೂರವಾಗುತ್ತೆ ಹಣಕ್ಕೆ ಸಂಬಂಧಿಸಿದ ಸಮಸ್ಯೆ

ಧನಾತ್ಮಕ ಶಕ್ತಿಗಾಗಿ: ಮನೆಯಲ್ಲಿ ಆಗಾಗ್ಗೆ ಜಗಳ, ನಷ್ಟ, ಕುಟುಂಬ ಸದಸ್ಯರ ಅನಾರೋಗ್ಯದಂತಹ ಸಮಸ್ಯೆಗಳು ತಲೆದೂರುತ್ತಿದ್ದರೆ ಅವು ಮನೆಯಲ್ಲಿನ ನಕಾರಾತ್ಮಕ ಶಕ್ತಿಯ ಸಂಕೇತ ಎಂದು ಹೇಳಬಹುದು. ಆದರೆ ಮನೆಯಲ್ಲಿ ಕುದುರೆ ಪ್ರತಿಮೆಯನ್ನು ಸ್ಥಾಪಿಸುವುದರಿಂದ ಮನೆಯಲ್ಲಿನ ನಕಾರಾತ್ಮಕತೆಯನ್ನು ತೆಗೆದುಹಾಕುವ ಮೂಲಕ ಸಕಾರಾತ್ಮಕ ಶಕ್ತಿಯನ್ನು (Positivity)  ಆಕರ್ಷಿಸುವಲ್ಲಿ ಇದು ಪರಿಣಾಮಕಾರಿ ಎಂದು ಹೇಳಲಾಗುತ್ತದೆ.

ಉತ್ತಮ ವೈವಾಹಿಕ ಜೀವನಕ್ಕಾಗಿ: ಮಲಗುವ ಕೋಣೆಯಲ್ಲಿ ಒಂಟಿ ಕುದುರೆಯ ಪ್ರತಿಮೆಯನ್ನು (Horse Statue) ಸ್ಥಾಪಿಸಬೇಡಿ. ಬದಲಿಗೆ ಜೋಡಿ ಕುದುರೆಯ ಪ್ರತಿಮೆಯನ್ನು ಸ್ಥಾಪಿಸುವುದು ಒಲ್ಲೆಯದಾಉಅ. ಇದರಿಂದಾಗಿ ಪತಿ -ಪತ್ನಿಯರ ನಡುವೆ ಯಾವುದೇ ಜಗಳವಿರುವುದಿಲ್ಲ ಮತ್ತು ಅವರ ವೈವಾಹಿಕ ಜೀವನ (Married Life) ಚೆನ್ನಾಗಿರುತ್ತದೆ. 

ಒಳ್ಳೆಯ ಕೆಲಸಕ್ಕಾಗಿ: ಉದ್ಯೋಗದಲ್ಲಿ  (Job) ಪ್ರಗತಿಗಾಗಿ, ಮನೆಯ ಉತ್ತರ ದಿಕ್ಕಿನಲ್ಲಿ ಕುದುರೆ ಪ್ರತಿಮೆ ಅಥವಾ ಫೋಟೋ ಇರಿಸಿ. ಇದರೊಂದಿಗೆ, ಮನೆಯ ಎಲ್ಲ ಸದಸ್ಯರು ಶಿಕ್ಷಣ ಮತ್ತು ವೃತ್ತಿಜೀವನದಲ್ಲಿ ಲಾಭವನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ.

ಇದನ್ನೂ ಓದಿ- Navratri 2021: ನವರಾತ್ರಿಯಲ್ಲಿ ಈ 4 ರಾಶಿಯವರ ಮೇಲೆ ದುರ್ಗಾ ಮಾತೆಯ ವಿಶೇಷ ಕೃಪೆ

ವ್ಯಾಪಾರದಲ್ಲಿ ಯಶಸ್ಸು: ಇದಕ್ಕಾಗಿ , ಅಂಗಡಿ ಅಥವಾ ಕಚೇರಿಯ ಉತ್ತರ ದಿಕ್ಕಿನಲ್ಲಿ ಕುದುರೆ ಪ್ರತಿಮೆ ಅಥವಾ ಫೋಟೋವನ್ನು ಸ್ಥಾಪಿಸಿ. ಇದು ವ್ಯಾಪಾರವನ್ನು ಹೆಚ್ಚಿಸುತ್ತದೆ ಮತ್ತು ಲಾಭ ಕೂಡ ಹೆಚ್ಚಾಗುತ್ತದೆ. 

ಜನಪ್ರಿಯತೆ ಪಡೆಯಲು: ಇದಕ್ಕಾಗಿ , ಮನೆ ಅಥವಾ ಕಚೇರಿಯ ದಕ್ಷಿಣ ದಿಕ್ಕಿನಲ್ಲಿ ಕುದುರೆ ಪ್ರತಿಮೆಯನ್ನು ಸ್ಥಾಪಿಸಿ. ಇದು ಯಶಸ್ಸನ್ನು ತರುವುದಲ್ಲದೆ, ಗೌರವವನ್ನೂ ಹೆಚ್ಚಿಸುತ್ತದೆ. ನಿಮ್ಮನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. 

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News